ಕ್ರೈಸ್ತ ಪಾಷಂಡವಾದ
 	
ಕ್ರಿಸ್ತ ತೋರಿಕೆಗೆ ಮಾನವ; ಆತನ ಹುಟ್ಟು, ಜೀವನ, ವೇದನಾನುಭವ-ಎಲ್ಲ ತೋರಿಕೆಯದು ಮಾತ್ರ ಎಂಬ ವಾದಕ್ಕೆ ಈ ಹೆಸರಿದೆ (ಡೊಸೀಟಿಸಂ). ಈ ವಾದದ ಅನುಯಾಯಿಗಳಲ್ಲಿ ಕೆಲವರು ಕ್ರಿಸ್ತನಲ್ಲಿ ಮಾನವ ಸ್ವಭಾವವಿತ್ತೆಂಬುದನ್ನು ನಿರಾಕರಿಸಿದರೆ, ಇನ್ನು ಕೆಲವರು ಅವನಿಗೆ ಮಾನವ ದೇಹವಿತ್ತು, ಅವನು ಹುಟ್ಟಿದ್ದು ನಿಜ ಎಂಬ ವಿಷಯವನ್ನೇ ಅಲ್ಲಗಳೆದರು. ಈ ವಾದ ಕ್ರೈಸ್ತಧರ್ಮದಷ್ಟೇ ಪುರಾತನದು. ಅಧ್ಯಾತ್ಮರಹಸ್ಯ ಜ್ಞಾನವಾದದಲ್ಲಿ (ನಾಸ್ಟಿಸಿಸಂ) ಇದರ ಮೂಲವಿದೆಯೆನ್ನಲಾಗಿದೆ. ಕ್ರಿಸ್ತನ ಶಿಷ್ಯ ಸಂತ ಯೋಹಾನನೇ ತನ್ನ  ಬರೆಹಗಳಲ್ಲಿ ಈ ವಾದವನ್ನು ಉಲ್ಲೇಖಿಸಿ ಖಂಡಿಸಿದ್ದಾನೆ. 					    (ಡಿ.ವಿ.ಡಬ್ಲ್ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ